ಹನುಮಗಿರಿ
ಮುಖಪುಟ ಸ್ಥಳ ಪುರಾಣ ಸೇವೆಗಳು ಕಾರ್ಯಕ್ರಮಗಳು ದೇಣಿಗೆ ಸಂಪರ್ಕಿಸಿ

ಶನಿ ದೋಷ ನಿವಾರಣೆಗೆ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರ

ಪಂಚಮುಖಿ ಆಂಜನೇಯ ಸ್ವಾಮೀ ವಿಗ್ರಹ

ಹನುಮಗಿರಿಯಲ್ಲಿರುವ ಪಂಚಮುಖಿ ಆಂಜನೇಯ ವಿಗ್ರಹವು 12 ಅಡಿ ಎತ್ತರವಿದ್ದು, ಏಕ ಕೃಷ್ಣ ಶಿಲೆಯಿಂದ ನಿರ್ಮಾಣಗೊಂಡಿದೆ. ದಕ್ಷಿಣಕ್ಕೆ ನರಸಿಂಹ, ಪಶ್ಚಿಮಕ್ಕೆ ಗರುಡ, ಉತ್ತರಕ್ಕೆ ವರಹಾ, ಊರ್ಧ್ವಮುಖಕ್ಕೆ ಹಯಗ್ರಿದ ಇರುವಂತಹ ಪಂಚಮುಖಿ ಆಂಜನೇಯ ಸ್ವಾಮೀ ವಿಗ್ರಹ ಶನಿದೋಷ ನಿವಾರಣೆಗೆ ಪ್ರಸಿದ್ದಿಯನ್ನು ಪಡೆದುಕೊಂಡಿದೆ.

ಪಂಚಮುಖಿ ಆಂಜನೇಯ ಸ್ವಾಮೀ ವಿಗ್ರಹ
ಪಂಚಮುಖಿ ಆಂಜನೇಯ ಸ್ವಾಮೀ ವಿಗ್ರಹ

ಭಕ್ತರ ನಂಬಿಕೆ

ಇಲ್ಲಿ ಬಂದು ಭಕ್ತಿಯಿಂದ ನೆನೆದರೆ ತಮ್ಮ ಕಷ್ಟಗಳು ಪರಿಹಾರಗೊಂಡು ಶನಿದೋಷ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಭಕ್ತರದ್ದು, ಇಂತಹ ನಂಬಿಕೆಗೆ ಪುಷ್ಠಿ ಕೊಡುವಂತಹ ಬಹಳಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆಯೇ ಸಿಗುತ್ತದೆ. ಶನಿದೋಷ ನಿವಾರಣೆಗಾಗಿ ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತದೆ. ವಿವಿಧ ರಾಜ್ಯಗಳಿಂದ ಭಕ್ತರು ಇಲ್ಲಿ ಬಂದು ಶನಿದೋಷ ನಿವಾರಣಾ ಪೂಜೆಗಳನ್ನು ಮಾಡಿಕೊಂಡು ಆಂಜನೇಯನ ಕೃಪೆಗೆ ಪಾತ್ರರಾಗುತ್ತಿದ್ದಾರೆ.

ಆಂಜನೇಯನ ಕೃಪೆ

ಇಲ್ಲಿರುವ ಆಂಜನೇಯ ನಮ್ಮೆಲ್ಲ ಕಷ್ಟಗಳನ್ನು ಪರಿಹರಿಸುತ್ತಾನೆ ಎನ್ನುವ ನಂಬಿಕೆ ಭಕ್ತಜನರದ್ದಾಗಿದೆ. ಶನಿ ದೇವರಿಗೆ ಆಂಜನೇಯ ತನ್ನ ಪಂಚಮುಖಗಳ ದಿವ್ಯರೂಪ ತೋರಿಸಿದ ಪವಿತ್ರ ಕ್ಷೇತ್ರ ಇದಾಗಿದೆ. ಪಂಚಮುಖಿ ಆಂಜನೇಯನ ಸೇವೆ ಮಾಡಿದವರನ್ನು ಎಂದೆಂದೂ ಪೀಡಿಸುವುದಿಲ್ಲವೆಂದು ಶನಿ ಈ ಸಮಯದಲ್ಲಿ ಅಭಯ ನೀಡುತ್ತಾರೆ.

ಭಕ್ತರ ಆಗಮನ

ದೇಶದ ವಿವಿಧ ಕಡೆಗಳಿಂದ ಪ್ರತಿ ನಿತ್ಯ ನೂರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ರಾಜ, ಮಹಾರಾಜರಿಂದ ಶ್ರೀಸಾಮಾನ್ಯರ ತನಕ ಸಾವಿರಾರು ಗಣ್ಯರು ಕ್ಷೇತ್ರದ ಕಾರಣಿಕತೆಗೆ ಶಿರಬಾಗಿದ್ದಾರೆ.