ಹನುಮಗಿರಿ
ಮುಖಪುಟ ಸ್ಥಳ ಪುರಾಣ ಸೇವೆಗಳು ಕಾರ್ಯಕ್ರಮಗಳು ದೇಣಿಗೆ ಸಂಪರ್ಕಿಸಿ
ಕ್ಷೇತ್ರದ ಪುನರುತ್ಥಾನದ ಪವಿತ್ರ ಕ್ಷಣ

ಬ್ರಹ್ಮಕಲಶೋತ್ಸವ

2026 Celebration

ಶ್ರೀ ಕ್ಷೇತ್ರ ಹನುಮಗಿರಿಯ ಪವಿತ್ರ ಸಂಕಲ್ಪ

ಹನುಮಗಿರಿಯ ಈ ಪವಿತ್ರ ಮಣ್ಣಿನಲ್ಲಿ ನಡೆಯುವ ಬ್ರಹ್ಮಕಲಶೋತ್ಸವವು ಭಕ್ತರ ಪಾಲಿಗೆ ಒಂದು ಅವಿಸ್ಮರಣೀಯ ಕ್ಷಣ. ಭಕ್ತಿಯ ಪರಾಕಾಷ್ಠೆಯಲ್ಲಿ ವಿಜೃಂಭಿಸುವ ಈ ಕಾರ್ಯಕ್ರಮವು ತಲೆಮಾರುಗಳವರೆಗೆ ನಿನದಿಸಲಿದೆ.

ಸಮಸ್ತ ಭಕ್ತಾದಿಗಳು ಈ ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಪಂಚಮುಖಿ ಆಂಜನೇಯನ ಕೃಪೆಗೆ ಪಾತ್ರರಾಗಬೇಕೆಂದು ಈ ಮೂಲಕ ಆಶಿಸುತ್ತೇವೆ.

ಮಹೋತ್ಸವದ ಅಧಿಕೃತ ಪ್ರಕಟಣೆ

09-04-2026 ರಿಂದ 12-04-2026 ರವರೆಗೆ

Official Event Dates

ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರ, ಹನುಮಗಿರಿ

ಆತ್ಮೀಯ ಭಗವದ್ಭಕ್ತರೇ, ಸ್ವಸ್ತಿ| ಶ್ರೀ ಗತ ಶಾಲಿವಾಹನ ಶಕ ಪರಾಭವ ನಾಮ ಸಂವತ್ಸರದ ಮೀನ ಮಾಸ ೨೬ ಸಲುವ ದಿನಾಂಕ 09-04-2026ನೇ ಗುರುವಾರದಿಂದ ಮೀನಮಾಸ ೨೯ ಸಲುವ ದಿನಾಂಕ 12-04-2026ನೇ ಆದಿತ್ಯವಾರದ ವರೆಗೆ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಹಾಗೂ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಇವರ ನೇತೃತ್ವದಲ್ಲಿ ಶ್ರೀ ಕೋದಂಡರಾಮ ಹಾಗೂ ಶ್ರೀ ಪಂಚಮುಖಿ ಆಂಜನೇಯ ದೇವರಿಗೆ ಏಕಕಾಲದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.

ಇದೇ ಸಂದರ್ಭದಲ್ಲಿ ಶ್ರೀ ಕೋಟಿ ರಾಮ ತಾರಕ ಮಹಾಯಜ್ಞ ನಡೆಯಲಿದೆ. ಇದರೊಂದಿಗೆ ರಾಮ ಜನ್ಮಭೂಮಿ ಅಯೋಧ್ಯೆಯಿಂದ ಹೊರಟು ಅಂಜನಾದ್ರಿ ಮೂಲಕ ಹನುಮಗಿರಿಗೆ ಆಗಮಿಸುವ ರಾಮಹನುಮ ಜ್ಯೋತಿ ರಥಯಾತ್ರೆ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಲಕ್ಷೋತ್ತರ ನಾರಿಕೇಳ ಸಮರ್ಪಣಾ ಯಜ್ಞ, ಭಜನಾ ಸಂಕೀರ್ತನಾ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ಸಂಪನ್ನವಾಗಲಿದೆ.

ಈ ಸಂದರ್ಭದಲ್ಲಿ ಭಗವತ್ಭಕ್ತರಾದ ತಾವೆಲ್ಲರೂ ಭಾಗವಹಿಸಿ, ಪ್ರಸಾದ ಸ್ವೀಕರಿಸಿ, ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿ.